ಓಡುವೆವು ಪ್ರತಿ ನಿಮಿಷ ಕಾಲನ ಬೆನ್ನಟ್ಟಿ

ಸಾವಿರ ಕನಸುಗಳ ಮೂಟೆ ಕಟ್ಟಿ.

ಅವೆಷ್ಟೋ ಮುಖಗಳು ಅವೆಷ್ಟೋ ತಿರುವುಗಳು ದಾರಿಯುದ್ದಕ್ಕೂ

ಪ್ರತಿ ಮುಖದ ಹಿಂದೆ ಒಂದು ವ್ಯಥೆ ಪ್ರತಿ ತಿರುವಿನಲ್ಲೊಂದು ಕಥೆ.

ಸಾಗಬೇಕಿದೆ ಮುಂದೆ ಎಲ್ಲವನ್ನು ದಾಟಿ.

 

ಭಾವ ಬಂಧನ ಬೆಳೆದವು ಚಿವುಟಿ ಬವಣೆಗಳ ಕೊನರು

ಅಗೆದು ಮೊಗೆದು ಬಗೆದ ಮನಸ್ಸಿನಲ್ಲಿ ನೆನಪುಗಳ ಚಿಗುರು.

ಅವೆಷ್ಟೋ ಕಲ್ಲುಗಳು ಅವೆಷ್ಟೋ ಮುಳ್ಳುಗಳು ದಾರಿಯುದ್ದಕ್ಕೂ

ಪ್ರತಿ ಕಲ್ಲಿನಡಿಯಲ್ಲಿ ಸತ್ತ ಹುಲ್ಲಿನ ಎಸಳು ಪ್ರತಿ ಮುಳ್ಳಿನಡಿಯಲ್ಲಿ ಆರಿದ ಪುಷ್ಪಕ ದಳ.

ಸಾಗಬೇಕಿದೆ ಮುಂದೆ ಎಲ್ಲವನ್ನು ದಾಟಿ.

 

ಚಿಂತೆಯ ಸಂತೆಯಲ್ಲಿ ಹುಡುಕಬೇಕಿದೆ ಹೊಸ ನಿರೀಕ್ಷೆಗಳನ್ನು

ಉತ್ತರಗಳೇ ಇಲ್ಲದ ಪ್ರಶ್ನೆಗಳನ್ನು ಪ್ರಶ್ನೆಗಳಾಗೆ ಉಳಿದ ಉತ್ತರಗಳನ್ನು.

ಅವೆಷ್ಟೋ ತುಡಿತಗಳು ಅವೆಷ್ಟೋ ಮಿಡಿತಗಳು ದಾರಿಯುದ್ದಕ್ಕೂ

ಪ್ರತಿ ತುಡಿತಕ್ಕೊಂದು ತವಕ ಪ್ರತಿ ಮಿಡಿತಕ್ಕೊಂದು ಕನವರಿಕೆ.

ಸಾಗಬೇಕಿದೆ ಮುಂದೆ ಎಲ್ಲವನ್ನು ದಾಟಿ.


‘ಅಮ್ಮ’ ಈ ಶಬ್ದವೇ ಒಂದು ಕವಿತೆ.. ಒಂದು ಕಥೆ.. ಅದು ಅರ್ಥಾತೀತ, ಅರ್ಥ ಅನಂತ. ಈ ಎರಡಕ್ಷರದಲ್ಲಿ ಆ ದೇವರು ಮಹಾಕಾವ್ಯವನ್ನೇ ಇಡಿದಿಟ್ಟಿದ್ದಾನೆ. ಆದರೆ ಅವಳ ಬಣ್ಣಿಸಲು, ವರ್ಣಿಸಲು ನಮಗೆ ಅಕ್ಷರಗಳಿಂದ ಸಾಧ್ಯವಿಲ್ಲ. ಅವಳ ಅನುಭೂತಿಗೆ ಯಾವ ಪದಗಳೂ ಸಾಟಿಯಲ್ಲ. ಮಗು ಜನಿಸಿದಾಗ ಒಂದು ಹೆಣ್ಣು ತಾಯಿಯಾಗಿ ತನಗೆ ತಾನೇ ಜನ್ಮ ನೀಡಿಕೊಳ್ಳುತ್ತಾಳಂತೆ. ತಾಯಿಯ ನಿಸ್ವಾರ್ಥದ ಸಂವೇದನೆ ಅವಳ ಅಂತಃಕರಣವನ್ನು ಆವರಿಸಿಬಿಟ್ಟಿರುತ್ತದೆ. ಪ್ರೀತಿ, ಮಮತೆ, ವಾತ್ಸಲ್ಯ, ಅನುಕಂಪ, ಭರವಸೆ ಹಾಗು ಜವಾಬ್ದಾರಿಗಳಂಥ ಅಮೂರ್ತ ಪರಿಕಲ್ಪನೆಗಳ ಮೂರ್ತ ಸ್ವರೂಪವೇ ತಾಯಿ. ಭಾರತೀಯ ಸಂಸ್ಕೃತಿ- ಸನಾತನ ಧಾರ್ಮಗಳಲ್ಲಿ ತಾಯಿ ನಿತ್ಯಸ್ಮರಣೀಯಳು, ನಿತ್ಯಪೂಜ್ಯಳು ಹೌದಾಗಿದ್ದರೂ, ವರುಷಕೊಮ್ಮೆ ಅಮ್ಮಂದಿರ ದಿನವನ್ನು ಆಚರಿಸುವುದು ಇತ್ತೀಚಿನ ಸಂಪ್ರದಾಯ. ಈ ಅಮ್ಮಂದಿರ ದಿನದಂದು ಆಕೆಯನ್ನು ಸ್ವಲ್ಪ ವಿಶೇಷವಾಗಿ ಅಭಿನಂದಿಸಲು ಈ ಕಿರು ಪ್ರಯತ್ನ.

ನನ್ನ ಅಮ್ಮನ ಪ್ರಪಂಚ ಬಹಳ ಚಿಕ್ಕದಾದರೂ, ಅವಳದು ಅಳತೆಗೆ ಸಿಗದ ಪ್ರೀತಿ. ಅವಳ ಒಲವು ಹಿಮಾಲಯಕ್ಕಿಂತಲೂ ಎತ್ತರ, ಸಹನೆ ಪೃಥ್ವಿಗಿಂತಲೂ ವಿಶಾಲ, ಮಮತೆ ಗಗನದಷ್ಟು ಅಗಾಧ. ನಾ ಬೆಳೆದು ಜೀವನದ ಪಯಣದಿ ಮುಂದೆ ಸಾಗಿದಂತೆಲ್ಲ ಅವಳು ನನ್ನ ನೆರಳಾಗಿ, ಬಲವಾಗಿ, ಬೆಂಬಲವಾಗಿ ಬೆನ್ನ ಹಿಂದೆ ನಿಂತಿದ್ದಾಳೆ. ನಾನು ಎಂದೂ ಮುಕ್ತವಾಗಿ ಅಮ್ಮನಿಗೆ ಕೃತಜ್ಞತೆ ಹೇಳಲಿಲ್ಲ. ಹೇಳಲು ಶಬ್ದಗಳ ಅವಶ್ಯಕತೆ ಕಂಡಿಲ್ಲ ನನಗೆ. ಕಾಲ ಬದಲಾಗುತ್ತಾ ಹೋದಂತೆ ಅವಳು ನಾನು ಇಬ್ಬರೂ ಬದಲಾಗಿದ್ದೀವಿ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸವಾಲುಗಳನ್ನು ಎದುರಿಸುವಷ್ಟು ಪಕ್ವತೆ ನನಗೂ ಬಂದಿದೆ. ಇದೆಲ್ಲಾ ಸಾಧ್ಯವಾದುದು ಅಮ್ಮನಿಂದಲೇ. ಹಲವು ಕ್ಷೇತ್ರಗಳಲ್ಲಿ ಪುರುಷರನ್ನು ಮೀರಿಸುವಂತಹ ಸಾಧನೆಯನ್ನು ಕೈಗೊಂಡ ಮಹಿಳೆಯರನ್ನು ಸಾಧಕಿ ಎನ್ನುತ್ತಾರೆ ಆದರೆ ಪುರುಷರಿಂದಲೂ ನಿಭಾಯಿಸಲು ಸಾಧ್ಯವಾಗದಂತಹ ಸಂಸಾರ ಎನ್ನುವ ಕಡಲನಲ್ಲಿ ಸಮರ್ಥವಾಗಿ ಈಜಿ ಜೀವನ ನಡೆಸುತ್ತಿರುವ ನನ್ನ ಅಮ್ಮನೂ ಸಾಧಕಿಯೆ ಸರಿ. ಅವಳೊಂದು ಬರೆದು ಮುಗಿಯದ ಕಾವ್ಯ, ನಿರಂತರವಾಗಿ ಹರಿಯೋ ತೊರೆ.

ನಾನು ಹುಟ್ಟಿ ಬೆಳದದ್ದು ಅವಿಭಕ್ತ ಕುಟುಂಬದಲ್ಲಿ. ಅವಿಭಕ್ತ ಕುಟುಂಬಗಳ ಅವೆಷ್ಟೋ ಒಳಿತು ಕೆಡುಕು ಹಿತ ಅಹಿತಗಳ ಪಟ್ಟಿಯೇ ರಚಿಸಬಹುದು ಆದರೆ ನನ್ನ ಸ್ಮೃತಿ ಪಟಲದಲ್ಲಿ ಸಧ್ಯಕ್ಕೆ ಉಳಿದಿರುವುದು ಕೇವಲ ಸಿಹಿ ನೆನಪುಗಳು ಹಾಗು ನನಗೆ ಸಿಕ್ಕ ಅಗಾಧ ಪ್ರೀತಿ ವಾತ್ಸಲ್ಯ ಹಾಗು ಆರೈಕೆ. ತನ್ನ ಉಸಿರನ್ನು ಪಣವಾಗಿಟ್ಟು ನನಗೆ ಉಸಿರು ಕೊಟ್ಟ ಅಮ್ಮ ಒಬ್ಬಳೇ ಆದರೂ, ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ನನ್ನ ಚಿಕ್ಕಮಂದಿರು ಹಾಗು ನನ್ನ ಸೋದರತ್ತೆಯರ ಕೊಡುಗೆ ಮರೆಯಲಾಗದು. ನನ್ನ ಅನಾರೋಗ್ಯದಲ್ಲಿ ತನ್ನ ನಿದ್ದೆ ಮರೆತು ತುಂಬು ಮನಸ್ಸಿನಿಂದ ನನ್ನ ಆರೈಕೆಮಾಡಿದ, ಪ್ರೀತಿ ಸ್ನೇಹಗಳ ಮಧುರ ಬಾಂಧವ್ಯಗಳ ಪಾಠ ಹೇಳಿಕೊಟ್ಟ ಚಿಕ್ಕಮ್ಮಂದಿರು, ಶಾಲೆಯಲ್ಲೂ ಮನೆಯಲ್ಲೂ ಶಿಕ್ಷಕಿಯಾಗಿ ತಿದ್ದಿ, ತೀಡಿ, ಸಮಗ್ರತೆ, ಋಜುತ್ವಗಳ ಮೌಲ್ಯ ಕಲಿಸಿ, ಕಾಡಿ ಬೇಡಿ ಬೈದು ಗ್ರಂಥಾಲಯ ಹಾಗು ಪುಸ್ತಕಗಳ ಗೀಳು ಹಚ್ಚಿಸಿದ ಸೋದರ ಅತ್ತೆಯಂದಿರು..ಇವರೆಲ್ಲರಿಗೂ ನಾನು ಸದಾ ಚಿರಋಣಿ. ಇವರೆಲ್ಲರ ಬಗ್ಗೆ ನನಗೆ ಸದಾ ಹೆಮ್ಮೆ ಇದೆ.

ಇವರಷ್ಟೇ ಅಲ್ಲದೆ, ತಮ್ಮ ‘ಮನೆ’ ಎ೦ಬ ಪುಟ್ಟ ವಿಶ್ವವನ್ನೇ ಪ್ರೀತಿಸುತ್ತ ತನ್ಮೂಲಕ ಎಲ್ಲರ ಒಳಿತನ್ನೇ ಆಶಿಸುವ ಪ್ರೇರಣಾ ಶಕ್ತಿಯಂಥ ಒಬ್ಬ ಮಹಿಳೆಯನ್ನು ನಾನು ನನ್ನ ಅತ್ತೆಯನ್ನಾಗಿ ಪಡೆದಿರುವೆ. ನವವಧುವಾಗಿ ಆ ಮನೆಯ ಹೊಸ್ತಿಲು ತುಳಿದ ಕ್ಷಣಗಳಲ್ಲಿ ನನ್ನ ಮನಸ್ಸಿನೊಳಗಿದ್ದ ‘ಅತ್ತೆ’ ಪದದ ಬಗೆಗಿನ ಒ೦ಚೂರು ಅಳುಕನ್ನು ಆಕೆಯ ಶಾ೦ತ, ಸರಳ ವರ್ತನೆ ಬಲು ಬೇಗ ತೊಡೆದು ಹಾಕಿತ್ತು. ಸಮಯ ಸ೦ದರ್ಭಕ್ಕೆ ತಕ್ಕ೦ತೆ ತಮ್ಮ ಪ್ರಾಪ೦ಚಿಕ ಅನುಭವದ ಅನೇಕ ಸ೦ಗತಿಗಳನ್ನವರು ನನಗೆ ತಿಳಿ ಹೇಳುತ್ತಿರುತ್ತಾರೆ. ಬದುಕನ್ನೆದುರಿಸುವ, ಸವಾಲುಗಳನ್ನು ಸ್ವೀಕರಿಸುವ , ಸಹನೆ, ತಾಳ್ಮೆಗಳಿಂದ ಜೀವನದಲ್ಲಿ ಎದುರಾಗುವ ಎಲ್ಲ ಕಷ್ಟಗಳನ್ನು ದಾಟಿ ಬೆಳೆಯಲು, ಎಂಥವರಿಗಾದರೂ ನಮ್ಮತ್ತೆ ಸ್ಪೂರ್ತಿಯಾಗಬಲ್ಲರು.

ಇವರೆಲ್ಲರ ಪ್ರೀತಿ ವಾತ್ಸಲ್ಯವನ್ನು ನೆನೆಯುತ್ತ, ಅತ್ಯಂತ ಪ್ರೀತಿಯಿಂದ ಜನ್ಮ ನೀಡಿ, ಸಾಕಿ ಸಲುಹಿ, ಪರಿಪೂರ್ಣ ವ್ಯಕ್ತಿತ್ವ ನೀಡಿದ ಅಮ್ಮ, ಚಿಕ್ಕಮಂದಿರು, ಸೋದರತ್ತೆ, ಹಾಗು ನನ್ನ ಅತ್ತೆ ಎಲ್ಲರಿಗೂ ಅಮ್ಮಂದಿರ ದಿನದ ಶುಭಾಶಯಗಳು. ಸದಾ ನೀವು ನಗುತಿರಿ.. ಈ ಜಗವಿರುವವರೆಗೂ..ನನ್ನ ಅಮ್ಮನಾಗಿ. ಹ್ಯಾಪಿ ಮದರ್ಸ್ ಡೇ.EXPO 2014 (2)


ಅಸೆಗಳಿಗೇನೊ ಸದಾ ರೆಕ್ಕೆ ಬಿಚ್ಚಿ ಹಾರುವ ಉತ್ಸಾಹ
ಹೇಳಿಕೊಳ್ಳಬೇಕು ಅನ್ನುವಷ್ಟರಲ್ಲಿ ಭಾವನೆಗಳೇಕೊ ಸ್ತಬ್ಧ
ಮನಸ್ಸಿನ ಮೌನದ ಕಾವ್ಯಕ್ಕೆ ಮುನ್ನುಡಿ ಈ ಖಾಲಿ ಕಾಗದ

ಹಿಂದೆಂದೂ ಯಾರಿಗೂ ಹೇಳದ, ಮುಂದೆಂದೂ ಯಾರಿಗೂ ತಿಳಿಯದ ಗುಟ್ಟು
ಕಾಲನ ತಾಪಕ್ಕೆ ನೆನಪುಗಳು ಭಸ್ಮವಾಗುವ ಮುನ್ನ ಸುಟ್ಟು
ಬರೆಯಬೇಕು ಎಂದಿರುವ ಪುಸ್ತಕದ ಮುನ್ನುಡಿ ಈ ಖಾಲಿ ಕಾಗದ

ನಾಳೆಯ ಬಾಳಿಗೆ ಭರವಸೆಯ ತೋರಣ ಕಟ್ಟಿ
ಕನಸಿನ ಬಾಗಿಲ ತೆರೆದಿಟ್ಟು
ಪ್ರೀತಿಯ ಲೇಖನಿಗೆ ಭಾವವೇ ಶಾಯಿ
ತುಂಬಲು ಕುಳಿತಿರುವೆ ಈ ಖಾಲಿ ಕಾಗದ


ಮಾನವ ಮೊದಲು ವಾಸಿಸಲು ಆರಂಭಿಸಿದ್ದು ಬೆಟ್ಟ ಪ್ರದೇಶದಲ್ಲಿ. ಮಾನವ ಕ್ರೂರಮೃಗಗಳಿಂದ ಕಾಪಡಿಕೊಳ್ಳುತ್ತಾ, ಅವುಗಳನ್ನು ಜಯಿಸಿ ಬಾಳಬೇಕಾಗಿತ್ತು. ಹೆಣ್ಣಿಗಿಂತ ಗಂಡು ದೈಹಿಕವಾಗಿ ಶಕ್ತಿವಂತನಾದುದರಿಂದ ಹೆಣ್ಣಿನ ರಕ್ಷಣೆಯನ್ನು ಗಂಡೇ ಮಾಡಬೇಕೆಂಬ ಒಂದು ನಿಯಮವನ್ನು ರೂಪಿಸಿಕೊಂಡರು. ಇದಕ್ಕೆ ಸಂಬಂಧಿಸಿದಂತೆ ಸಮುದಾಯದಲ್ಲಿ ಒಂದು ನೀತಿ ರೂಪುಗೊಂಡಿತು. ಹಾಗೆ ಒಬ್ಬ ಗಂಡಸು ಹೆಣ್ಣನ್ನು ರಕ್ಷಿಸಲು ಅಸಮರ್ಥನಾದರೆ ಅಂಥವನಿಗೆ ಮದುವೆ ಇಲ್ಲ ಎಂಬ ಸಂಪ್ರದಾಯ ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತಿದ್ದವರಲ್ಲಿ ಹುಟ್ಟಿಕೊಂಡಿತು.

ಈ ಒಂದು ಕಾರಣದಿಂದ ಗಂಡಸು ತನ್ನ ವೀರತನವನ್ನು ಪ್ರದರ್ಶಿಸಲೇ ಬೇಕಿತ್ತು. ತಾನು ಕೊಂದ ಒಂದು ಕಾಡು ಪ್ರಾಣಿಯ ಉಗುರನ್ನೋ, ಹಲ್ಲನ್ನೋ ತಂದು, ಒಂದು ಹೆಣ್ಣಿಗೆ ಅದನ್ನು ಬಹುಮಾನವಾಗಿ ಕೊಟ್ಟು, ತನ್ನ ಶೂರತನವನ್ನು ತೋರಿಸಬೇಕಾಗಿತ್ತು. ಅದನ್ನು ಹಗ್ಗದಲ್ಲಿ ಕಟ್ಟಿ ಅವಳ ಕುತ್ತಿಗೆಗೆ ಕಟ್ಟುತ್ತಿದ್ದನು. ಇದೇ ತಾಳಿ ಕಟ್ಟುವುದರ ಆರಂಭ ಸ್ಥಿತಿ. ಹೀಗೆ ಹೆಂಗಸರನ್ನು ಮನೆಯಲ್ಲಿಟ್ಟು, ಪ್ರೀತಿಯಿಂದ, ಅವಳನ್ನು ಎಲ್ಲ ರೀತಿಯ ವಿಪತ್ತುಗಳಿಂದ ರಕ್ಷಿಸಿ, ಅವಳ ಹಾಗು ತನ್ನ ಜೀವನಕ್ಕಾಗಿ ಬೇಕಾದುದನ್ನು ದುಡಿದು ತರುವ ಹೊಣೆಗಾರಿಕೆ ಗಂಡಿಗೆ ಬಂದಿತು.

ಈ ತಾಳಿ ಕಟ್ಟುವಿಕೆಯಲ್ಲಿ ಇನ್ನೊಂದು ಕುತೂಹಲಕಾರಿ ಸಂಗತಿಯಿದೆ. ಆ ದಿನಗಳಲ್ಲಿ ಆಗಾಗ್ಗೆ ಜನರ ಮಧ್ಯೆ – ಸಂಸ್ಥಾನಗಳ ಮಧ್ಯೆ – ಪೂರ್ವ ಪಶ್ಚಿಮದವರ ಮಧ್ಯೆ – ಯುದ್ಧಗಳು ಆಗುತ್ತಿದ್ದವು. ಈ ಯುದ್ಧಗಳಲ್ಲಿ ಗೆದ್ದವರು ಹೆಂಗಸರನ್ನೇ ಹೆಚ್ಚಾಗಿ ಹಿಂಸಿಸುತ್ತಿದ್ದರು. ಇವರುಗಳಿಂದ ತಮ್ಮ ಶೀಲ ಕಾಪಾಡಿಕೊಳ್ಳಲು ಹೆಂಗಸರು ಪೊಟಾಶಿಯಂ ಸಯನೈಡ್ (Potassium Cyanide) ಎಂಬ ರಸಾಯನಿಕ ವಸ್ತು ಅಥವ ಅದಕ್ಕೆ ಸಮನದ ಮತ್ತೊಂದನ್ನೊ ಒಂದು ಪುಟ್ಟ ಡಬ್ಬಿಯಲ್ಲಿಟ್ಟು ಅದನ್ನು ತಾಳಿಯ ಜೊತೆ ಕಟ್ಟಿಕೊಳ್ಳಲಾರಂಭಿಸಿದರು. ಈ ಡಬ್ಬಿಯನ್ನು ದಾರದಲ್ಲಿ ಕಟ್ಟಿ ಕುತ್ತಿಗೆಗೆ ಹಾಕಿಕೊಳ್ಳುವುದು ಸಂಪ್ರದಾಯವಾಯಿತು. ದಾರದ ಉದ್ದ ಎಷ್ಟಿರಬೇಕೆಂದರೆ – ಮುಚ್ಚಳ ತೆರೆದರೆ ಬಾಯಿಯ ಮಟ್ಟಕ್ಕೆ ಆ ದಾರ ಇರಬೇಕು. ಯಾರದರೂ ಅತ್ಯಾಚಾರ ಮಾಡಲು ಬಂದರೆ ಡಬ್ಬಿಯನ್ನು ತೆಗೆದು ವಿಷ ಸೇವಿಸಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಹೀಗೆ ಹೆಣ್ಣು ತನ್ನ ಶೀಲವನ್ನು ರಕ್ಷಿಸಿಕೊಳ್ಳುತ್ತಿದ್ದಳು. ನಂತರ ಇದರಿಂದ ಏನಾಯಿತೆಂದರೆ ಗಂಡ ಹೆಂಡತಿ ಮಧ್ಯೆ ಏನೇ ಜಗಳ ಬಂದರೂ ಹೆಣ್ಣು ಆ ಡಬ್ಬಿಯಲ್ಲಿದ್ದ ವಿಷ ಸೇವಿಸಿ ಆತ್ಮಹತ್ಯೆಗೆ ಯಸ್ನಿಸುತ್ತಿದ್ದಳು. ನಂತರ ಡಬ್ಬಿಯೇ ಬೇಡ ಎಂದು ಬೊಟ್ಟಿನೊಳಗೇ ಅರಗನ್ನು ಇಡಲು ಆರಂಭಿಸಿದರು.

ಹೀಗೆ ತಾಳಿಯೆಂಬುದು ಗಂಡಿನ ವೀರತನದ ಸಂಕೇತ ಎಂಬುದು ಹೋಗಿ, ಸ್ತ್ರೀಯರಿಗೆ ಆಪತ್ಕಾಲದಲ್ಲಿ ತನ್ನ ಶೀಲವನ್ನು ರಕ್ಷಿಸಿಕೊಳ್ಳುವ ಒಂದು ಸಾಧನವಾಯಿತು. ಈಗ ಅದೂ ಹೋಗಿ ಮದುವೆಯಾದವಳಿವಳು ಎಂದು ತೋರಿಸುವ ಗುರುತಾಗಿ ತಾಳಿ ಬದಲಾಗಿದೆ. ಪೂರ್ವ ಕಾಲದಲ್ಲಿದ್ದ ಕೆಲವು ಆಚರಣೆಗಳು ನಂತರದ ಅಭ್ಯಾಸಗಳ ಜೊತೆ ಸೇರಿ ತಾಳಿ ರೂಪತಾಳಿದೆ. ಒಂದು ದೇಶದಲ್ಲಿ ಬಂದ ಅಭ್ಯಾಸ, ಆಚರಣೆಗಳು ಇತರ ದೇಶಗಳಿಗೂ ಬರುವುದು. ಒಂದು ಗುಂಪಿನವರು ಆಚರಿಸುವ ಹಲವು ಸಂಪ್ರದಾಯಗಳನ್ನು ಇತರರು, ಅದು ಸರಿಯೇ, ತಪ್ಪೇ ಎಂದು ಯೋಚಿಸಿಯೂ ನೋಡದೆ ಹಿಂಬಾಲಿಸಿಬಿಡುತ್ತಾರೆ. ಇದು ಅಗತ್ಯವೇ?


A saint asked his disciples, ‘Why do we shout in anger? Why do people shout at each other when they are upset?’

Disciples thought for a while, one of them said, ‘Because we lose our calm’

‘But, why to shout when the other person is just next to you?’ asked the saint. ‘Isn’t it possible to speak to him or her with a soft voice? Why do you shout at a person when you’re angry?’ Disciples gave some other answers which did not satisfy the saint.

Finally he explained, ‘When two people are angry at each other, that anger creates a distance between their hearts. To cover that distance they must shout to be able to hear each other. The angrier they are the stronger and louder they shout to hear each other through that great distance.’

Then the saint asked, ‘What happens when two people fall in love? They don’t shout at each other but talk softly, why? Because their hearts are very close. The distance between them is very small…’

The saint continued, ‘When they love each other even more, what happens? They do not speak, only whisper and they get even closer to each other in their love. Finally they even need not whisper, they only look at each other and that’s all. That is how close two people are when they love each other.’

MORAL: When you argue do not let your hearts get distant, do not say words that creates a distance between each otherYour special day has come by again.  You were my good friend but I don’t know you anymore. You made me realize that people are not who they seem to be. I have always tried to take people at face value but have now realized  that in most circumstances  people have underlining meanings for the words and actions that they use. Some people come in our life as blessings; others come in our life as lessons. You came as a lesson.

I just wish you would admit what you have done is wrong. The last time I will worry if you are alright. I wish you well and I hope you’re happy.

It is bad enough when a stranger betrays you, but when it is someone you believed to be a close and trusted friend it is especially hurtful. There are many reasons that cause people to betray one another. Sometimes they are very deliberate and intended to hurt the other person. And sometimes they are consequences of choices that are made with no intention of doing any harm to anyone. I don’t know what is your reason.

Your thoughts and deeds always made me respect you.  Anyway, I have no time to grieve and feel angry.

Well my dear I wish you Happy Birthday , An abundance of good wishes for you are in store.

PS: Did you know “growing old is mandatory, growing up is optional”. I wish you grow up and not just grow old!

 


ದೂರದ ಬೆಟ್ಟದ ತುದಿಯಲ್ಲಿ, ಸತ್ತು ಮಲಗಿದೆ ಒಂದು ಕನಸು ಮಿನುಗು ತಾರೆಗಳ ಹೊದಿಕೆ ಹೊದ್ದು,
ಸ್ವಚ್ಛಂದವಾದ ಬೆಳದಿಂಗಳ ಮಡಿಲಲ್ಲಿ, ಬೆಳ್ಮೋಡಗಳ ನೆರಳಲ್ಲಿ

ಧೈರ್ಯ ವಿಶ್ವಾಸದಿಂದ ಮುನ್ನಡೆದಿದ್ದೆ, ಆ ಕನಸ ಬೆನ್ನತ್ತಿ.
ಹಸಿವು ನಿದ್ದೆಗಳ ಮೆಟ್ಟಿ ಸಾಗಿದ್ದೆ ಮುಂದೆ..

ಅವೆಷ್ಟೊ ದಿನಗಳ ಬಳಿಕ ನಿಜವಾಗಿತ್ತು ಆ ಕನಸು.
ಸತತ ಪರಿಶ್ರಮದ ಫಲವೆಂದು ತಿಳಿದೆ ಆ ನನಸು

ಕನಸು ನನಸಾದ ಸಂಭ್ರಮ ಅನುಭವಿಸುವ ಮುನ್ನವೆ
ಸಿಲುಕಿದೆ ನಾ ನಿರಾಸೆಯ ಸುಳಿಗೆ .

ಕ್ಷಣಿಕ ಸುಖ ಕೊಟ್ಟು ಮರೆಯಾಗಿ..
ಈಗ ಧೂಳಲ್ಲಿ ಸತ್ತು ಮಲಗಿರುವುದು ಅದೇ ಕನಸು.

ದೂರದ ಬೆಟ್ಟದ ತುದಿಯಲ್ಲಿ ಮಲಗಿದೆ ಒಂದು ಕನಸು.. ಮಿನುಗು ತಾರೆಗಳ ಹೊದಿಕೆ ಹೊದ್ದು.
ಸ್ವಚ್ಛಂದವಾದ ಬೆಳದಿಂಗಳ ಮಡಿಲಲ್ಲಿ..ಬೆಳ್ಮೋಡಗಳ ನೆರಳಲ್ಲಿ


When you unfriend people you’re telling them that there’s no place in your social world for them. And you have successfully conveyed this to me. I would be lying if I say I totally don’t care.

It puzzled me and I thought of asking you why you did this. I’m driving myself crazy wondering why. Am I so offensive or obnoxious or boring that hiding wasn’t enough. You cut the cord, slammed the door, excluded me from your circle. May be I did something in real life that made you start disliking my behavior or personality. May be because of all those unimportant and inappropriate things I discussed with you….

I am mad at you. Feeling bad about myself. After this undesirable behavior of yours, you are not worth a sorry for whatever you thing was my mistake. On the other side I feel sure, you must be trying to simplify your life. You want to limit your Online friends to people you want or see some value. No offence. Not anymore.

I truly believe universe has a plan and a reason for everything that has happened. This instance has taught me, If I don’t like having to “unfriend” someone or be unfriended myself then not to Online-friend a person I’m just getting to know or I hardly know,.

Although I want to trash all your memories, I would still have your mails and messages lying in some folders of my mailbox. I think someday when I am old I may want to go back and reread them, for nostalgia’s sake. I rarely delete anything from anyone else though. I just can’t do it. It’s such a pointless rejection

Rather than flailing around in the dark and tormenting myself with the Whys, I waited few days for the emotional sting to dull – and then writing this. This may not yield an explanation; but it’ll definitely leave me better off than I am right now.
What you did was weird. And if I fail to point out how weird it is, the only person who benefits is YOU. And I don’t owe you anything.

If a Online friend has offended you, just hide the person. Unhide later… or never. You still won’t be subjected to the undesirable behavior. It really hurts

We probably were not that good of friends. Anyway, Life’s too short to worry about this stuff. I’ll be over it soon. I really will.


One of the greatest injustice of our times is undoubtedly the Child Labour which is taking place so openly day after day, year after year. India has the largest number of child labourers in the world! An estimated fifteen million children are bonded labourers, working in a slave like condition. And more than half of them are exposed to worst forms of child labour. Across the country children lose their childhood in hard and painful labour, condemned to a bleak routine of unending joyless toil. Many countries in the world believe that education is a legal duty, and parents are required to send their children to school, children are required to attend the school, and the government is forced to enforce compulsory education.

‘No child below the age of 14 years shall be employed to work’ says Article 24 of Indian Constitution. But practically  speaking, in India primary education is not compulsory nor child labour illegal. As a result, a major portion of child population stays at home to take care of cattle, collect firewood, work in fields, find employment in cottage industries, restaurants or do household work in other’s home.

The working children suffer from several problems. Condemnation to toil in dull, repetitive tasks retards the social and psychological development of the child and hampers their emotional growth. The working condition in certain establishments is unhealthy and sometimes dangerous. Wages are often a pittance and discipline is enforced with brutality.

Though there are laws against child labour, their enforcement poses problems. Children have become an economic asset to poor. In spite of free primary education programs of government, unfortunately, to many poor families, the cost of sending their child to school is nothing but the income lost by sending them to work.  As per the recent UNICEF report, for every single year of education that a child receives, their adult earning potential increases by 10 per cent averagely. Unless there is an improvement in the economic condition of the poor, and improvement in the access to education to both adults and children, abolition of child labour is impossible.

A Child, for the full and harmonious development of his personality should grow up in a family environment, in an atmosphere of happiness, love and understanding. Its high time that those who occupy high positions in politics, those who are esteemed as rich, those who are considered high-born, to realize that exploiting the childhood of an innocent child is an unjust deed. Human conscience never accepts this. ‘Treat others as you would wish to be treated yourself, and you will find this the shortest way to benevolence’ says Confucianism. Like wise, treat every other child as you would wish to treat your own child, at least within your area of capability!


There are few things in life so blessed and conscience-free, Just like a pure, uncomplicated childhood. I am sure no one can forget the childhood days as we got to be on the seventh heaven, played a lot and had so much of fun. When I was a kid, I wanted to be a writer or an Artist.But the childhood having been put off now, I see frivolous pieces surface now.

Something came to me today, very quietly. I have been writing since childhood and I also had plans to be a librarian “when I grew old”. I was very fond of writing poetry and sketching in school. I still remember, the painting I made for the very first time was appreciated quite well among the majority (Painting on environment pollution! ). The projector of my memories starts to flicker now, showing the clips of my past.

Those days, I would write down some stuff in a piece of paper or behind a  notebook, and I thought it was a poetry. Somehow, to me,  poetry was a mess of feelings on a paper.  And I would create a free sketch for such “poems” (Back then, what I actually thought was – A few rhyming lines and a sketch made a “poem” LOL).

I started writing a diary probably at age of 10. And I used to fill my journal with visual notes as well (sketches!). I was clearing my cupboard the other day and found few old papers of my so called poetry and sketches.

Here’s a quick slideshow of sketches I did in School and this includes a poem which must have been my first one.  Check this out…..lol.  I don’t know what made me to sketch these.

This slideshow requires JavaScript.

Writing and Sketching was so near and dear to me in my childhood and teenage.( I still have many sketches of my school days which I cherish and hope I won’t loose them 🙂 )

Ever since i started attending college, i got no time to write such visual journals anymore. I only write articles or poems in my diary when I am sad or I couldnt sleep at night. And I blog only when I am literally jobless..He he..

I strive for poetry because I choose to follow a different measure of life. Something about pens, pencils and papers bring me back to myself. As in, back to a person without any thoughts and feelings except for those of my own. When I get here, it makes it easier to be sincere. I do this because I want to discover more about my world before I jump back into the pits of work and pressure.

Though I am constantly continuing my discovery through my writings I haven’t sketched in years and have recently (timidly) been trying to.