ನಾನು ಕೋಗಿಲೆ ಹಾಡು, ನನ್ನ ರಾಗ ನೀನು
ನಾನು ನವಿಲಿನ ನಾಟ್ಯ, ನನ್ನ ತಾಳ ನೀನು

ನಾನು ಮೂಕ ಹಾಡು, ನನ್ನ ಪಲ್ಲವಿ ನೀನು
ನಾನು ಮೌನ ಭಾಷೆ, ನನ್ನ ವ್ಯಾಕರಣ ನೀನು

ನಾನು ತಿಳಿ ಮೋಡ, ನನ್ನ ಚೆಂದದ ಮಳೆಬಿಲ್ಲು ನೀನು
ನಾನು ಕರಗಿ ಜಾರುವ ಇಬ್ಬನಿ, ನನ್ನ ಹೂವಿನ ಮಡಿಲು ನೀನು

ನಾನು ಬೆಳದಿಂಗಳ ಬಾನು, ನನ್ನ ನಕ್ಷತ್ರ ಕಾಂತಿ ನೀನು
ನಾನು ಸುಡುವ ಬಿಸಿಲು, ನನ್ನ ತಂಪು ನೆರಳು ನೀನು

ನನ್ನ ಬೇಡಿಕೆ ಇಷ್ಟೆ..
ನಮ್ಮ ಅನುಬಂಧಕ್ಕೆ ಸಾಕಷ್ಟು ಆಯಸ್ಸು ಇರಲಿ
ನಿನ್ನ ಬೆಚ್ಚಗಿನ ಮನಸಿನಲ್ಲಿ ನನಗೊಂದಿಷ್ಟು ಜಾಗ ಸದಾ ಇರಲಿ..